13
ನಾನು ನಿಮ್ಮ ಬಳಿಗೆ ಮೂರನೆಯ ಸಾರಿ ಬರುತ್ತಿದ್ದೇನೆ. * 13:1 ಧರ್ಮೋ 19:15; ಅರಣ್ಯ 35:30“ಯಾವ ದೂರಿದ್ದರೂ ಅದಕ್ಕೆ ಇಬ್ಬರು ಮೂವರು ಸಾಕ್ಷಿಗಳ ಆಧಾರವಿರಬೇಕು,” ಎಂದು ಲಿಖಿತವಾಗಿದೆ. ನಾನು ಎರಡನೆಯ ಸಾರಿ ನಿಮ್ಮಲ್ಲಿದ್ದಾಗ 13:2 2 ಕೊರಿ 13:10; 1 ಕೊರಿ 4:21ತಿರುಗಿ ಬಂದರೆ ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ: 13:2 2 ಕೊರಿ 12:21ಪೂರ್ವ ಪಾಪಕೃತ್ಯಗಳನ್ನು ಇನ್ನೂ ನಡಿಸುವವರಿಗೂ ಮತ್ತು ಮಿಕ್ಕಾದವರೆಲ್ಲರಿಗೂ ಹೇಳುತ್ತೇನೆ. ಕ್ರಿಸ್ತನು ನನ್ನಲ್ಲಿ ಮಾತನಾಡುತ್ತಾನೆಂಬುವುದಕ್ಕೆ ನೀವು ಸಾಕ್ಷಿ ಕೇಳಿದ್ದರಿಂದ ನಾನು ಹೀಗೆ ಹೇಳುತ್ತೇನೆ. ಆತನು ನಿಮ್ಮನ್ನು ಕುರಿತು ದುರ್ಬಲನಾಗಿರದೆ § 13:3 2 ಕೊರಿ 10:4ಶಕ್ತನೇ ಆಗಿದ್ದಾನೆ. ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ. * 13:4 ಫಿಲಿ. 2:7,8; 1 ಪೇತ್ರ 3:18ಆತನು ಬಲಹೀನಾವಸ್ಥೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟನು ನಿಜ; 13:4 ರೋಮಾ. 1:4; 6:4ಆದರೂ ದೇವರ ಬಲದಿಂದ ಜೀವಿಸುವವನಾಗಿದ್ದಾನೆ. 13:4 2 ಕೊರಿ 12:10ನಾವೂ ಸಹ ಆತನ ಬಲಹೀನಾವಸ್ಥೆಯಲ್ಲಿ ಪಾಲುಗಾರರಾಗಿದ್ದೇವೆ, § 13:4 ರೋಮಾ. 6:8ಆದರೂ ಆತನೊಂದಿಗೆ ದೇವರ ಬಲದಿಂದ ನಿಮಗಾಗಿ ಬದುಕುವವರಾಗಿದ್ದೇವೆ.
ನೀವು ಕ್ರಿಸ್ತ ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ನೀವೇ ಪರಿಶೋಧಿಸಿಕೊಳ್ಳಿರಿ. * 13:5 ರೋಮಾ. 8:10; ಗಲಾ. 4:19ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದು ನಿಮಗೆ ತಿಳಿಯುವುದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಆಯೋಗ್ಯರೇ. ನಾವಂತೂ ಆಯೋಗ್ಯರಲ್ಲವೆಂದು ನಿಮಗೆ ಗೊತ್ತಾಗುವುದೆಂಬುದಾಗಿ ನನಗೆ ಭರವಸೆವುಂಟು. ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಆ ಪರೀಕ್ಷೆಗೆ ಒಳ್ಳಗಾದವರೆಂದು ತೋರಿ ಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಆ ಪರೀಕ್ಷೆಗೆ ಒಳ್ಳಗಾದವರೆನಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವವರಾಗಬೇಕೆಂಬುದೇ ನಮ್ಮ ಉದ್ದೇಶ. ಸತ್ಯಕ್ಕೆ ವಿರೋಧವಾಗಿ ನಾವೇನೂ ಮಾಡಲಾರೆವು, ಸತ್ಯಾಭಿವೃದ್ದಿಗೋಸ್ಕರವೇ ಸಮಸ್ತವನ್ನು ಮಾಡುತ್ತೇವೆ. 13:9 1 ಕೊರಿ 4:10; 2 ಕೊರಿ 4:12; 12:5; 9:10ನಾವು ಬಲಹೀನರಾಗಿದ್ದರೂ ನೀವು ಬಲಿಷ್ಠರಾಗಿದ್ದ ಪಕ್ಷಕ್ಕೆ ಸಂತೋಷಪಡುತ್ತೇವೆ; ಇದಲ್ಲದೆ ನೀವು ಪೂರ್ಣ ಕ್ರಮಕ್ಕೆ ಬರಬೇಕೆಂದು ಪ್ರಾರ್ಥಿಸುತ್ತೇವೆ.
10 ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗಲೇ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಬದಲಾಗಿ ಕಟ್ಟುವುದಕ್ಕಾಗಿಯೇ ಬರೆದಿದ್ದೇನೆ. 13:10 2 ಕೊರಿ 10:8ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ § 13:10 2 ಕೊರಿ 2:3ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಇದನ್ನು ಬರೆಯುತ್ತಿದ್ದೇನೆ.
ಕಡೆ ಮಾತುಗಳು
11 ಕಡೆಯದಾಗಿ ಸಹೋದರರೇ, * 13:11 ನಿಮಗೆ ಕ್ಷೇಮವಾಗಲಿಸಂತೋಷಪಡಿರಿ! ಕ್ರಮಪಡಿಸಿಕೊಳ್ಳಿರಿ. ಧೈರ್ಯವುಳ್ಳವರಾಗಿರಿ, 13:11 ರೋಮಾ. 12:16ಏಕ ಮನಸ್ಸುಳ್ಳವರಾಗಿರಿ, 13:11 ಮಾರ್ಕ 9:50ಸಮಾಧಾನದಿಂದ ಇರಿ; ಆಗ ಪ್ರೀತಿಸ್ವರೂಪನೂ, § 13:11 ರೋಮಾ. 15:33ಶಾಂತಿದಾಯಕನೂ ಆದ ದೇವರು ನಿಮ್ಮ ಸಂಗಡ ಇರುವನು. 12  * 13:12 ರೋಮಾ. 16:16ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. 13  13:13 ಫಿಲಿ. 4:22ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ. 14  13:14 ರೋಮಾ. 16:20; 1 ಕೊರಿ 16:23ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ, § 13:14 ಯೂದ. 21ದೇವರ ಪ್ರೀತಿಯೂ, * 13:14 ಫಿಲಿ. 2:1ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ.

*13:1 13:1 ಧರ್ಮೋ 19:15; ಅರಣ್ಯ 35:30

13:2 13:2 2 ಕೊರಿ 13:10; 1 ಕೊರಿ 4:21

13:2 13:2 2 ಕೊರಿ 12:21

§13:3 13:3 2 ಕೊರಿ 10:4

*13:4 13:4 ಫಿಲಿ. 2:7,8; 1 ಪೇತ್ರ 3:18

13:4 13:4 ರೋಮಾ. 1:4; 6:4

13:4 13:4 2 ಕೊರಿ 12:10

§13:4 13:4 ರೋಮಾ. 6:8

*13:5 13:5 ರೋಮಾ. 8:10; ಗಲಾ. 4:19

13:9 13:9 1 ಕೊರಿ 4:10; 2 ಕೊರಿ 4:12; 12:5; 9:10

13:10 13:10 2 ಕೊರಿ 10:8

§13:10 13:10 2 ಕೊರಿ 2:3

*13:11 13:11 ನಿಮಗೆ ಕ್ಷೇಮವಾಗಲಿ

13:11 13:11 ರೋಮಾ. 12:16

13:11 13:11 ಮಾರ್ಕ 9:50

§13:11 13:11 ರೋಮಾ. 15:33

*13:12 13:12 ರೋಮಾ. 16:16

13:13 13:13 ಫಿಲಿ. 4:22

13:14 13:14 ರೋಮಾ. 16:20; 1 ಕೊರಿ 16:23

§13:14 13:14 ಯೂದ. 21

*13:14 13:14 ಫಿಲಿ. 2:1