3
ದಾವೀದನ ಪುತ್ರರು
1 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಪುತ್ರರು ಯಾರೆಂದರೆ:
ಇಜ್ರೆಯೇಲ್ ಪಟ್ಟಣದ ಅಹೀನೋವಮಳ ಚೊಚ್ಚಲ ಮಗ ಅಮ್ನೋನನು;
ಕರ್ಮೇಲ್ಯಳಾದ ಅಬೀಗೈಲಳಿಂದ ಹುಟ್ಟಿದ ಎರಡನೆಯವನಾದ ದಾನಿಯೇಲನು,
2 ಗೆಷೂರಿನ ಅರಸನಾಗಿರುವ ತಲ್ಮಾಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೆಯ ಮಗ ಅಬ್ಷಾಲೋಮನು,
ಹಗ್ಗೀತಳಿಂದ ಹುಟ್ಟಿದ ನಾಲ್ಕನೆಯ ಮಗ ಅದೋನೀಯನು.
3 ಅಬೀಟಾಲಳಿಂದ ಹುಟ್ಟಿದ ಐದನೆಯ ಮಗ ಶೆಫಟ್ಯನು,
ದಾವೀದನ ಹೆಂಡತಿ ಎಗ್ಲಳಿಂದ ಹುಟ್ಟಿದ ಆರನೆಯ ಮಗ ಇತ್ರಾಮನು.
4 ಈ ಆರು ಮಂದಿ ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದವರು. ಅಲ್ಲಿ ಅವನು ಏಳುವರೆ ವರ್ಷ ಆಳಿದನು.
ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು. 5 ಯೆರೂಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು:
ದಾವೀದನ ಹೆಂಡತಿ ಬತ್ಷೆಬೆಳು* 3:5 ಬತ್ಷೆಬೆಳು ಹೀಬ್ರೂ ಭಾಷೆಯಲ್ಲಿ ಬತ್ಷೂವ ಅಮ್ಮಿಯೇಲನ ಮಗಳು. ಆಕೆಗೆ ಶಮ್ಮೂವ ಎಂಬ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡು ಮಕ್ಕಳು ಜನಿಸಿದರು.
6 ಇದಲ್ಲದೆ ಇಬ್ಹಾರ್, ಎಲೀಷಾಮ† 3:6 ಎಲೀಷಾಮ ಅಥವಾ ಎಲೀಷೂವ, ಎಲೀಫೆಲೆಟ್, 7 ನೋಗಹ, ನೆಫೆಗ್, ಯಾಫೀಯ, 8 ಎಲೀಷಾಮ, ಎಲ್ಯಾದ, ಎಲೀಫೆಲೆಟ್, ಈ ಒಂಬತ್ತು ಮಂದಿ ಮಕ್ಕಳಿದ್ದರು.
9 ಉಪಪತ್ನಿಗಳ ಮಕ್ಕಳು ಹೊರತಾಗಿ ಇವರೆಲ್ಲರು ದಾವೀದನ ಮಕ್ಕಳಾಗಿದ್ದರು; ತಾಮಾರಳು ಇವರ ಸಹೋದರಿಯಾಗಿದ್ದಳು.
ಯೆಹೂದ್ಯರ ಅರಸರು
10 ಸೊಲೊಮೋನನ ಮಗನು ರೆಹಬ್ಬಾಮನು;
ಇವನ ಮಗನು ಅಬೀಯನು;
ಇವನ ಮಗನು ಆಸನು;
ಇವನ ಮಗನು ಯೆಹೋಷಾಫಾಟನು;
11 ಇವನ ಮಗನು ಯೆಹೋರಾಮನು;
ಇವನ ಮಗನು ಅಹಜ್ಯನು;
ಇವನ ಮಗನು ಯೋವಾಷನು.
12 ಇವನ ಮಗನು ಅಮಚ್ಯನು;
ಇವನ ಮಗನು ಅಜರ್ಯನು;
ಇವನ ಮಗನು ಯೋತಾಮನು.
13 ಇವನ ಮಗನು ಆಹಾಜನು;
ಇವನ ಮಗನು ಹಿಜ್ಕೀಯನು;
ಇವನ ಮಗನು ಮನಸ್ಸೆಯು.
14 ಇವನ ಮಗನು ಆಮೋನನು;
ಇವನ ಮಗನು ಯೋಷೀಯನು.
15 ಯೋಷೀಯನ ಮಕ್ಕಳು:
ಚೊಚ್ಚಲಮಗನಾದ ಯೋಹಾನಾನ್,
ಎರಡನೆಯವನಾದ ಯೆಹೋಯಾಕೀಮ್,
ಮೂರನೆಯವನಾದ ಚಿದ್ಕೀಯ,
ನಾಲ್ಕನೆಯವನಾದ ಶಲ್ಲೂಮ್.
16 ಯೆಹೋಯಾಕೀಮನ ಮಕ್ಕಳು:
ಇವನ ಮಗನಾದ ಯೆಕೊನ್ಯ;
ಇವನ ಮಗನು ಚಿದ್ಕೀಯ.
ಸೆರೆಯ ನಂತರದ ರಾಜವಂಶಸ್ಥರು
17 ಯೆಹೋಯಾಕೀನನು ಸೆರೆಯಲ್ಲಿದ್ದಾಗ ಅವನ ವಂಶಜರು:
ಇವನ ಮಗ ಶೆಯಲ್ತಿಯೇಲ್, 18 ಮಲ್ಕೀರಾಮ, ಪೆದಾಯ್, ಶೆನಚ್ಚರ, ಯೆಕಮ್ಯ, ಹೋಷಾಮ ಮತ್ತು ನೆದಬ್ಯ.
19 ಪೆದಾಯನ ಮಕ್ಕಳು:
ಜೆರುಬ್ಬಾಬೆಲನು, ಶಿಮ್ಮೀ.
ಜೆರುಬ್ಬಾಬೆಲನ ಮಕ್ಕಳು:
ಮೆಷುಲ್ಲಾಮನು, ಹನನ್ಯನು. ಇವರ ಸಹೋದರಿಯಾದ ಶೆಲೋಮೀತಳು. 20 ಇವರಲ್ಲದೆ ಐವರು ಗಂಡು ಮಕ್ಕಳು ಅವನಿಗಿದ್ದರು: ಹಷುಬನು, ಓಹೆಲನು, ಬೆರೆಕ್ಯನು, ಹಸದ್ಯ, ಯೂಷಬ್ಹೆಸೆದ್
21 ಹನನ್ಯನ ವಂಶಜರು:
ಪೆಲಟ್ಯನು, ಯೆಶಾಯನು; ರೆಫಾಯನ ಮಕ್ಕಳು, ಅರ್ನಾನನ ಮಕ್ಕಳು, ಓಬದ್ಯನ ಮಕ್ಕಳು, ಶೆಕನ್ಯನ ಮಕ್ಕಳು.
22 ಶೆಕನ್ಯನ ವಂಶಜರು:
ಶೆಮಾಯನ ಮತ್ತು ಅವನ ಮಕ್ಕಳು ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ, ಶಾಫಾಟ್, ಈ ಆರು ಮಂದಿಯು.
23 ನೆಯರ್ಯನ ಮಕ್ಕಳು:
ಎಲ್ಯೋವೇನೈನು, ಹಿಜ್ಕೀಯನು, ಅಜ್ರೀಕಾಮನು, ಈ ಮೂರು ಮಂದಿಯು.
24 ಎಲ್ಯೋವೇನೈನ ಮಕ್ಕಳು:
ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ, ಅನಾನೀ ಎಂಬ ಏಳುಮಂದಿ.