6
ಲೇವಿ
ಲೇವಿಯ ಪುತ್ರರು:
ಗೇರ್ಷೋನ್, ಕೊಹಾತ್, ಮೆರಾರೀ.
ಕೊಹಾತನ ಪುತ್ರರು:
ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲನು.
ಅಮ್ರಾಮನ ಪುತ್ರರು:
ಆರೋನನು, ಮೋಶೆಯು, ಮಿರ್ಯಾಮಳು.
ಆರೋನನ ಪುತ್ರರು:
ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್.
ಎಲಿಯಾಜರನು ಫೀನೆಹಾಸನನ್ನು ಪಡೆದನು,
ಫೀನೆಹಾಸನು ಅಬೀಷೂವನನ್ನು ಪಡೆದನು,
ಅಬೀಷೂವನು ಬುಕ್ಕೀಯನನ್ನು ಪಡೆದನು,
ಬುಕ್ಕೀಯನು ಉಜ್ಜೀಯನನ್ನು ಪಡೆದನು,
ಉಜ್ಜೀಯನು ಜೆರಹ್ಯನನ್ನು ಪಡೆದನು,
ಜೆರಹ್ಯನು ಮೆರಾಯೋತನನ್ನು ಪಡೆದನು,
ಮೆರಾಯೋತನು ಅಮರ್ಯನನ್ನು ಪಡೆದನು,
ಅಮರ್ಯನು ಅಹೀಟೂಬನನ್ನು ಪಡೆದನು,
ಅಹೀಟೂಬನು ಚಾದೋಕನನ್ನು ಪಡೆದನು,
ಚಾದೋಕನು ಅಹೀಮಾಚನನ್ನು ಪಡೆದನು,
ಅಹೀಮಾಚನು ಅಜರ್ಯನನ್ನು ಪಡೆದನು,
ಅಜರ್ಯನು ಯೋಹಾನಾನನನ್ನು ಪಡೆದನು;
10 ಯೋಹಾನಾನನು ಅಜರ್ಯನನ್ನು ಪಡೆದನು.
ಅಜರ್ಯನು ಯೆರೂಸಲೇಮಿನಲ್ಲಿ ಸೊಲೊಮೋನನು ಕಟ್ಟಿಸಿದ ದೇವಾಲಯದೊಳಗೆ ಯಾಜಕ ಸೇವೆ ಮಾಡುತ್ತಿದ್ದವನು.
11 ಅಜರ್ಯನು ಅಮರ್ಯನನ್ನು ಪಡೆದನು,
ಅಮರ್ಯನು ಅಹೀಟೂಬನನ್ನು ಪಡೆದನು,
12 ಅಹೀಟೂಬನು ಚಾದೋಕನನ್ನು ಪಡೆದನು,
ಚಾದೋಕನು ಶಲ್ಲೂಮನನ್ನು ಪಡೆದನು,
13 ಶಲ್ಲೂಮನು ಹಿಲ್ಕೀಯನನ್ನು ಪಡೆದನು,
ಹಿಲ್ಕೀಯನು ಅಜರ್ಯನನ್ನು ಪಡೆದನು,
14 ಅಜರ್ಯನು ಸೆರಾಯನನ್ನು ಪಡೆದನು,
ಸೆರಾಯನು ಯೆಹೋಚಾದಾಕನನ್ನು* 6:14 ಯೆಹೋಚಾದಾಕ ಅಥವಾ ಯೋಚಾದಾಕ ಪಡೆದನು,
15 ಯೆಹೋವ ದೇವರು ನೆಬೂಕದ್ನೆಚ್ಚರನ ಕೈಯಿಂದ ಯೆಹೂದ, ಯೆರೂಸಲೇಮಿನವರನ್ನು ಸೆರೆಯಾಗಿ ಒಯ್ದಾಗ ಯೆಹೋಚಾದಾಕನು ಸೆರೆಯಾಗಿ ಹೋದನು.
 
16 ಲೇವಿಯ ಪುತ್ರರು:
ಗೇರ್ಷೋಮ್, ಕೊಹಾತ್, ಮೆರಾರೀ ಎಂಬುವರು.
17 ಗೇರ್ಷೋಮನ ಪುತ್ರರ ಹೆಸರುಗಳು:
ಲಿಬ್ನೀ, ಶಿಮ್ಮೀ.
18 ಕೊಹಾತನ ಪುತ್ರರು:
ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.
19 ಮೆರಾರೀಯ ಪುತ್ರರು:
ಮಹ್ಲೀ, ಮೂಷೀ.
 
ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರವಾಗಿ:
20 ಗೇರ್ಷೋಮಿನವರು:
ಅವನ ಮಗ ಲಿಬ್ನೀ, ಅವನ ಮಗ ಯಹತ್,
ಅವನ ಮಗ ಜಿಮ್ಮ,
21 ಅವನ ಮಗ ಯೋವಾಹ, ಅವನ ಮಗ ಇದ್ದೋ, ಅವನ ಮಗನಾದ ಜೆರಹ,
ಅವನ ಮಗ ಯೆವತ್ರೈ.
22 ಕೊಹಾತನ ಪುತ್ರರು:
ಅವನ ಮಗ ಅಮ್ಮೀನಾದಾಬ್, ಅವನ ಮಗ ಕೋರಹ,
ಅವನ ಮಗ ಅಸ್ಸೀರ್, 23 ಅವನ ಮಗ ಎಲ್ಕಾನಾ,
ಅವನ ಮಗ ಎಬ್ಯಾಸಾಫ್, ಅವನ ಮಗ ಅಸ್ಸೀರ್,
24 ಅವನ ಮಗ ತಹತ್, ಅವನ ಮಗ ಉರೀಯೇಲ್,
ಅವನ ಮಗ ಉಜ್ಜೀಯ, ಅವನ ಮಗ ಸೌಲ್.
25 ಎಲ್ಕಾನನ ವಂಶಜರು:
ಅಮಾಸೈ, ಅಹಿಮೋತ್,
26 ಅವನ ಮಗ ಎಲ್ಕಾನ, ಅವನ ಮಗ ಚೋಫೈ,
ಅವನ ಮಗ ನಹತ್, 27 ಅವನ ಮಗ ಎಲೀಯಾಬ್,
ಅವನ ಮಗ ಯೆರೋಹಾಮ್, ಅವನ ಮಗ ಎಲ್ಕಾನ,
ಅವನ ಮಗ ಸಮುಯೇಲ್.
28 ಸಮುಯೇಲನ ಪುತ್ರರು:
ಚೊಚ್ಚಲ ಮಗ ವಷ್ಣಿ ಎಂಬ ಯೋಯೇಲ್ ಮತ್ತು
ಎರಡನೆಯ ಮಗ ಅಬೀಯ.
29 ಮೆರಾರೀಯ ವಂಶಜರು:
ಮಹ್ಲೀ, ಅವನ ಮಗ ಲಿಬ್ನೀ,
ಅವನ ಮಗ ಶಿಮ್ಮಿ; ಅವನ ಮಗ ಉಜ್ಜ,
30 ಅವನ ಮಗ ಶಿಮ್ಮಾ, ಅವನ ಮಗ ಹಗ್ಗೀಯ,
ಅವನ ಮಗ ಅಸಾಯ.
ದೇವಾಲಯದ ವಾದ್ಯಗಾರರು
31 ಮಂಜೂಷವನ್ನು ನೆಲೆಗೊಳಿಸಿದ ತರುವಾಯ ದಾವೀದನು ಯೆಹೋವ ದೇವರ ಮನೆಯಲ್ಲಿ ವಾದ್ಯಗಾರರನ್ನು ನೇಮಿಸಿದನು. 32 ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟುವವರೆಗೆ, ಈ ವಾದ್ಯಗಾರರು ಸಭೆಯ ಗುಡಾರದ ನಿವಾಸದ ಮುಂದೆ ಸೇವಿಸುತ್ತಾ ಇದ್ದರು. ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.
 
33 ಸೇವೆಗೆ ಆಯ್ಕೆಯಾದ ವ್ಯಕ್ತಿಗಳು ಮತ್ತು ಅವರ ಪುತ್ರರ ಹೆಸರುಗಳು ಹೀಗಿವೆ:
 
ಕೊಹಾತ್ಯರ ಮಕ್ಕಳಲ್ಲಿ
ಸಂಗೀತಗಾರನಾದ ಹೇಮಾನನು.
ಅವನು ಯೋಯೇಲನ ಮಗನು, ಅವನು ಸಮುಯೇಲನ ಮಗನು,
34 ಅವನು ಎಲ್ಕಾನನ ಮಗನು, ಅವನು ಯೆರೋಹಾಮನ ಮಗನು,
ಅವನು ಎಲೀಯೇಲನ ಮಗನು, ಅವನು ತೋಹನ ಮಗನು,
35 ಅವನು ಚೂಫನ ಮಗನು, ಅವನು ಎಲ್ಕಾನನ ಮಗನು,
ಅವನು ಮಹತನ ಮಗನು, ಅವನು ಅಮಾಸೈಯ ಮಗನು,
36 ಅವನು ಎಲ್ಕಾನನ ಮಗನು, ಅವನು ಯೋಯೇಲನ ಮಗನು,
ಅವನು ಅಜರ್ಯನ ಮಗನು, ಅವನು ಚೆಫನ್ಯನ ಮಗನು,
37 ಅವನು ತಹತನ ಮಗನು, ಅವನು ಅಸ್ಸೀರನ ಮಗನು,
ಅವನು ಎಬ್ಯಾಸಾಫನ ಮಗನು, ಅವನು ಕೋರಹನ ಮಗನು,
38 ಅವನು ಇಚ್ಹಾರನ ಮಗನು, ಅವನು ಕೊಹಾತನ ಮಗನು,
ಅವನು ಲೇವಿಯನ ಮಗನು, ಅವನು ಇಸ್ರಾಯೇಲನ ಮಗನು.
39 ಹೇಮಾನನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಅವನ ಸಹೋದರನಾದ ಆಸಾಫನು ಜೊತೆಸೇವಕನಾಗಿದ್ದನು.
ಈ ಆಸಾಫನು ಬೆರೆಕ್ಯನ ಮಗನು, ಅವನು ಶಿಮ್ಮನ ಮಗನು.
40 ಅವನು ಮೀಕಾಯೇಲನ ಮಗನು, ಅವನು ಬಾಸೇಯನ ಮಗನು,
ಅವನು ಮಲ್ಕೀಯನ ಮಗನು, 41 ಅವನು ಎತ್ನಿಯ ಮಗನು,
ಅವನು ಜೆರಹನ ಮಗನು, ಅವನು ಅದಾಯನ ಮಗನು,
42 ಅವನು ಏತಾನನ ಮಗನು, ಅವನು ಜಿಮ್ಮನ ಮಗನು,
ಅವನು ಶಿಮ್ಮಿಯ ಮಗನು, 43 ಅವನು ಯಹತನ ಮಗನು,
ಅವನು ಗೇರ್ಷೋಮನ ಮಗನು, ಅವನು ಲೇವಿಯ ಮಗನು.
44 ಅವರ ಸಹೋದ್ಯೋಗಿ ಮೆರಾರೀಯ ಪುತ್ರರು ಎಡಗಡೆಯಲ್ಲಿ ನಿಂತಿದ್ದರು.
ಏತಾನನು ಕೀಷೀಯ ಮಗನು, ಅವನು ಅಬ್ದೀಯ ಮಗನು,
ಅವನು ಮಲ್ಲೂಕನ ಮಗನು, 45 ಅವನು ಹಷಬ್ಯನ ಮಗನು,
ಅವನು ಅಮಚ್ಯನ ಮಗನು, ಅವನು ಹಿಲ್ಕೀಯನ ಮಗನು,
46 ಅವನು ಅಮ್ಚೀಯ ಮಗನು, ಅವನು ಬಾನೀಯ ಮಗನು,
ಅವನು ಶೆಮೆರನ ಮಗನು, 47 ಅವನು ಮಹ್ಲೀಯ ಮಗನು,
ಅವನು ಮೂಷೀಯ ಮಗನು, ಅವನು ಮೆರಾರೀಯ ಮಗನು,
ಅವನು ಲೇವಿಯ ಮಗನು.
 
48 ಅವರ ಸಹೋದರರಾದ ಇತರ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಕವಾಗಿದ್ದರು. 49 ಆದರೆ ಆರೋನನೂ, ಅವನ ಪುತ್ರರೂ ದಹನಬಲಿಯ ಪೀಠದ ಮೇಲೆಯೂ, ಧೂಪವನ್ನು ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಳದ ಸಮಸ್ತ ಕಾರ್ಯಕ್ಕೂ, ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ನೇಮಕವಾಗಿದ್ದರು.
 
50 ಆರೋನನ ವಂಶಜರು:
ಅವನ ಮಗನು ಎಲಿಯಾಜರನು, ಅವನ ಮಗನು ಫೀನೆಹಾಸನು,
ಅವನ ಮಗನು ಅಬೀಷೂವನು, 51 ಅವನ ಮಗನು ಬುಕ್ಕೀಯು,
ಅವನ ಮಗನು ಉಜ್ಜೀ, ಅವನ ಮಗನು ಜೆರಹ್ಯಾಹನು,
52 ಅವನ ಮಗನು ಮೆರಾಯೋತನು, ಅವನ ಮಗನು ಅಮರ್ಯನು,
ಅವನ ಮಗನು ಅಹೀಟೂಬನು, 53 ಅವನ ಮಗನು ಚಾದೋಕನು,
ಅವನ ಮಗನು ಅಹೀಮಾಚನು.
 
54 ಕೊಹಾತನ ಗೋತ್ರದ ಆರೋನನ ವಂಶಜರಿಗೆ ನೇಮಕವಾದ ಪ್ರಾಂತ್ಯ ಇದು: ಅವರಿಗೆಂದು ಪ್ರತ್ಯೇಕಿಸಿದ ಪ್ರದೇಶದ ಪ್ರಥಮ ಚೀಟಿನ ಪಾಲನ್ನು ಅವರು ಪಡೆದುಕೊಂಡರು.
55 ಅವು ಯಾವುವೆಂದರೆ: ಕೊಹಾತ್ಯರ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ, ಯೆಹೂದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ, ಅದರ ಸುತ್ತಲಿರುವ ಗೋಮಾಳಗಳೂ ಅವರಿಗೆ ದೊರೆತವು. 56 ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ, ಯೆಫುನ್ನೆಯ ಮಗ ಕಾಲೇಬನಿಗೆ ಕೊಟ್ಟರು. 57 ಯೆಹೂದದ ಕುಲಗಳಲ್ಲಿ ಆರೋನನ ಪುತ್ರರಿಗೆ ಕೊಟ್ಟ ಪಟ್ಟಣಗಳು ಯಾವುವೆಂದರೆ: ಆಶ್ರಯ ನಗರವಾದ ಹೆಬ್ರೋನ್, ಲಿಬ್ನವೂ, ಯತ್ತೀರೂ, ಎಷ್ಟೆಮೋವವೂ, ಅವುಗಳ ಉಪನಗರಗಳೂ; 58 ಹೀಲೇನ್, ದೆಬೀರ್, 59 ಆಷಾನ್, ಯುತಾಹ ಮತ್ತು ಬೇತ್ ಷೆಮೆಷ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು.
60 ಬೆನ್ಯಾಮೀನನ ಗೋತ್ರದಿಂದ ಕೊಟ್ಟವುಗಳು, ಗಿಬ್ಯೋನ್, ಗೆಬಾ, ಆಲೆಮೆತೂ, ಅನಾತೋತೂ, ಅದರ ಗೋಮಾಳುಗಳು.
ಇವರ ಕುಟುಂಬಗಳಿಗೆ ದೊರಕಿದ ಎಲ್ಲಾ ಪಟ್ಟಣಗಳು ಹದಿಮೂರು.
 
61 ಆ ಗೋತ್ರದ ಕುಟುಂಬಗಳಲ್ಲಿ ಉಳಿದ ಕೊಹಾತನ ಪುತ್ರರಿಗೂ ಚೀಟುಹಾಕಿ ಮನಸ್ಸೆಯ ಅರ್ಧ ಗೋತ್ರದಿಂದ ಹತ್ತು ಪಟ್ಟಣಗಳು ದೊರೆತವು.
62 ಗೇರ್ಷೋಮನ ಪುತ್ರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ ಹದಿಮೂರು ಪಟ್ಟಣಗಳು ದೊರಕಿದ್ದವು.
63 ಮೆರಾರೀಯ ಪುತ್ರರಿಗೂ ಅವರ ಕುಟುಂಬಗಳ ಪ್ರಕಾರ ಚೀಟುಹಾಕಿ, ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬುಲೂನನ ಗೋತ್ರದಿಂದಲೂ ಹನ್ನೆರಡು ಪಟ್ಟಣಗಳು ದೊರಕಿದ್ದವು.
 
64 ಇಸ್ರಾಯೇಲರು ಲೇವಿಯರಿಗೆ ಈ ಪಟ್ಟಣಗಳನ್ನೂ, ಅವುಗಳ ಉಪನಗರಗಳನ್ನೂ ಕೂಡಾ ಕೊಟ್ಟರು.
 
65 ಅವರು ಚೀಟುಹಾಕಿ ಯೆಹೂದ ಸಿಮೆಯೋನ್ ಬೆನ್ಯಾಮೀನ್ ಕುಲಗಳಿಂದ ಮೇಲೆ ಹೆಸರು ಹೇಳಿದ ಪಟ್ಟಣಗಳನ್ನು ಕೊಟ್ಟರು.
 
66 ಕೊಹಾತನ ಪುತ್ರರ ಮಿಕ್ಕಾದ ಕುಟುಂಬಗಳಿಗೂ, ಅವರ ಮೇರೆಗಳಲ್ಲಿ ಎಫ್ರಾಯೀಮನ ಗೋತ್ರದೊಳಗೆ ಪಟ್ಟಣಗಳು ದೊರೆತಿದ್ದವು.
67 ಇದಲ್ಲದೆ ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ, 68 ಯೊಕ್ಮೆಯಾಮನ್ನೂ, ಬೇತ್ ಹೋರೋನ್, 69 ಅಯ್ಯಾಲೋನ್, ಗತ್ ರಿಮ್ಮೋನನ್ನೂ, ಅದರ ಉಪನಗರಗಳನ್ನೂ ಕೊಟ್ಟರು.
70 ಇದಲ್ಲದೆ ಕೊಹಾತನ ಪುತ್ರರ ಮಿಕ್ಕಾದ ಕುಟುಂಬಕ್ಕೋಸ್ಕರ ಮನಸ್ಸೆಯ ಅರ್ಧ ಗೋತ್ರದಿಂದ ಆನೇರನ್ನೂ, ಅದರ ಉಪನಗರಗಳನ್ನೂ; ಬಿಳ್ಳಾಮ್ ಉಪನಗರಗಳನ್ನೂ ಕೊಟ್ಟರು.
 
71 ಮನಸ್ಸೆಯ ಅರ್ಧ ಗೋತ್ರದಿಂದ ಗೇರ್ಷೋಮನ
ಪುತ್ರರಿಗೆ ಬಾಷಾನಿನಲ್ಲಿರುವ ಗೋಲಾನೂ, ಅದರ ಉಪನಗರಗಳನ್ನೂ; ಅಷ್ಟಾರೋತ್ ಅದರ ಉಪನಗರಗಳನ್ನೂ;
72 ಇಸ್ಸಾಕಾರನ ಗೋತ್ರದಿಂದ ಕೆದೆಷ್, ಅದರ ಉಪನಗರಗಳನ್ನೂ; ದಾಬೆರತ್ ಅದರ ಉಪನಗರಗಳನ್ನೂ; 73 ರಾಮೋತ್ ಅದರ ಉಪನಗರಗಳನ್ನೂ; ಅನೇಮ್, ಅದರ ಉಪನಗರಗಳನ್ನೂ;
74 ಆಶೇರನ ಗೋತ್ರದಿಂದ ಮಷಾಲ್, ಅಬ್ದೋನ್ 75 ಹೂಕೋಕ್, ಅದರ ಉಪನಗರಗಳನ್ನೂ; ರೆಹೋಬ್, ಅದರ ಉಪನಗರಗಳನ್ನೂ;
76 ನಫ್ತಾಲಿ ಗೋತ್ರದಿಂದ ಗಲಿಲಾಯದಲ್ಲಿರುವ ಕೆದೆಷ್, ಅದರ ಉಪನಗರಗಳನ್ನೂ; ಹಮ್ಮೋನ್, ಅದರ ಉಪನಗರಗಳನ್ನೂ; ಕಿರ್ಯಾತಯಿಮ್, ಅದರ ಉಪನಗರಗಳೂ ದೊರಕಿದ್ದವು.
 
77 ಮೆರಾರೀಯ ಉಳಿದ ಮಕ್ಕಳಿಗೂ,
ಜೆಬುಲೂನನ ಗೋತ್ರದಿಂದ ರಿಮ್ಮೋನೋ, ಅದರ ಉಪನಗರಗಳೂ, ತಾಬೋರ್, ಅದರ ಉಪನಗರಗಳೂ;
78 ರೂಬೇನನ ಗೋತ್ರದಿಂದ ಯೆರಿಕೋವಿನ ಬಳಿಯಲ್ಲಿ ಯೊರ್ದನ್ ನದಿಯ ಪೂರ್ವದಿಕ್ಕಿನ ಮರುಭೂಮಿಯಲ್ಲಿರುವ ಬೆಚೆರ್, ಅದರ ಉಪನಗರಗಳೂ; ಯಹಚ, ಅದರ ಉಪನಗರಗಳೂ; 79 ಕೆದೇಮೋತ್, ಮೇಫಾತ್ ಅದರ ಉಪನಗರಗಳೂ;
80 ಗಾದನ ಗೋತ್ರದಿಂದ ಗಿಲ್ಯಾದಿನ ರಾಮೋತ್, ಅದರ ಉಪನಗರಗಳೂ; ಮಹನಯಿಮ್ ಅದರ ಉಪನಗರಗಳೂ; 81 ಹೆಷ್ಬೋನ್, ಯಜ್ಜೇರ್ ಮತ್ತು ಅದರ ಉಪನಗರಗಳೂ ದೊರೆತವು.

*6:14 6:14 ಯೆಹೋಚಾದಾಕ ಅಥವಾ ಯೋಚಾದಾಕ