ಕೀರ್ತನೆ 43
1 ದೇವರೇ, ನನ್ನನ್ನು ನಿರ್ದೋಷಿ ಎಂದು ನಿರ್ಣಯಿಸಿರಿ,
ಭಕ್ತಿಹೀನ ಜನತೆಯ ವಿರೋಧವಾಗಿ
ನನ್ನ ನ್ಯಾಯವನ್ನು ವಾದಿಸಿರಿ.
ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ
ನನ್ನನ್ನು ತಪ್ಪಿಸಿರಿ.
2 ನೀವು ನನ್ನ ದೇವರು, ನನ್ನ ಬಲವಾದ ಕೋಟೆಯು;
ನೀವು ಏಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ?
ಏಕೆ ನಾನು ಶತ್ರುವಿನ ಬಾಧೆಯಿಂದ
ದುಃಖದಲ್ಲಿ ನಡೆದುಕೊಳ್ಳಬೇಕು?
3 ನಿಮ್ಮ ಬೆಳಕನ್ನೂ ನಿಮ್ಮ ಸತ್ಯವನ್ನೂ ಕಳುಹಿಸಿರಿ;
ಅವು ನನ್ನನ್ನು ನೀವು ವಾಸಿಸುವ
ನಿಮ್ಮ ಪರಿಶುದ್ಧ ಪರ್ವತಕ್ಕೆ
ನನ್ನನ್ನು ಬರಮಾಡಲಿ.
4 ದೇವರೇ, ನನ್ನ ದೇವರೇ, ಆಗ ನಿಮ್ಮ ಬಲಿಪೀಠದ ಬಳಿಗೆ ಬರುವೆನು.
ನನ್ನ ಸಂತೋಷವೂ ಹರ್ಷವೂ
ಆಗಿರುವ ನಿಮ್ಮ ಬಳಿಗೂ ಬಂದು,
ಕಿನ್ನರಿಯಿಂದ ನಿಮ್ಮನ್ನು ಕೊಂಡಾಡುವೆನು.
5 ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ?
ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ?
ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ.
ಹೌದು, ನಾನು
ದೇವರನ್ನೇ ಕೊಂಡಾಡುತ್ತಿರುವೆನು.