ಯೆಹೋಶುವ. 15. ಯೆಹೂದ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವುದೆಂದರೆ: ಕಟ್ಟಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಚಿನ್ ಮರುಭೂಮಿಯ ದಕ್ಷಿಣ ಭಾಗ. ಲವಣ ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ, ಅಕ್ರಬ್ಬೀಮ್ ಎಂಬ ಕಣಿವೆಯ ದಕ್ಷಿಣಮಾರ್ಗವಾಗಿ ಚಿನಿಗೆ ಹೋಗುವದು. ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್ ಬರ್ನೇಯಕ್ಕೂ ಅಲ್ಲಿಂದ ಹೆಚ್ರೋನನಿಂದ ಅದ್ದಾರವರೆಗೂ ಮುಂದುವರೆದು ಅಲ್ಲಿ ತಿರಿಗಿಕೊಂಡು ಕರ್ಕದವರೆಗೂ ವಿಸ್ತರಿಸಿಕೊಂಡಿತ್ತು, ಅಲ್ಲಿಂದ ಈಜಿಪ್ಟನ ಅಚ್ಮೋನ ನದಿಗೆ ಬಂದು ಮೆಡಿಟೆರಿಯನ್ ಸಮುದ್ರದವರೆಗೆ ಹೋಗಿ ಸೇರುವುದು. ಇದೇ ಯೆಹೂದದ ದಕ್ಷಿಣ ಮೇರೆ. ಅದರ ಪೂರ್ವದ ಮೇರೆ, ಯೊರ್ದನ್ ನದಿ ಕೊನೆಯ ಮಟ್ಟಿಗಿರುವ ಲವಣ ಸಮುದ್ರವು. ಉತ್ತರ ಕಡೆಗೆ ಯೊರ್ದನ್ ನದಿ ಮೇರೆ ಕೊನೆ ಹತ್ತಿರ ಸಮುದ್ರದ ಮುಖದ್ವಾರದಿಂದ ಇತ್ತು; ಅಲ್ಲಿಂದ ಬೇತ್ ಹೊಗ್ಲಾಕ್ಕೂ, ಅಲ್ಲಿಂದ ಉತ್ತರಕ್ಕಿರುವ ಬೇತ್ ಅರಾಬನ್ನು ದಾಟಿ, ರೂಬೇನನ ಮಗ ಬೋಹನನ ಬಂಡೆಯ ವರೆಗೆ ಇತ್ತು. ಅಲ್ಲಿಂದ ಆಕೋರ್ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಗೆ ತಿರುಗಿಕೊಂಡು ದಕ್ಷಿಣದಲ್ಲಿರುವ ಅದುಮೀಮಿನ ದಿಬ್ಬೆಗೆ ಎದುರಾಗಿರುವ ಗಿಲ್ಗಾಲಿಗೂ, ಅಲ್ಲಿಂದ ಏನ್ ಷೆಮೆಷ್ ಎಂಬ ಬುಗ್ಗೆಗೂ, ಅಲ್ಲಿಂದ ಏನ್ ರೋಗೆಲ್‌ವರೆಗೂ ಇತ್ತು. ಅಲ್ಲಿಂದ ಯೆಬೂಸಿಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣಮಾರ್ಗವಾಗಿ ಹಿನ್ನೋಮ್ ತಗ್ಗನ್ನು ದಾಟಿ, ಉತ್ತರಕ್ಕಿರುವ ರೆಫಾಯಿಮ್ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕೆ ಬೆನ್ ಹಿನ್ನೋಮನ ತಗ್ಗಿನ ಮುಂದಿರುವ ಬೆಟ್ಟದ ಶಿಖರದವರೆಗೂ ಹೋಗುತ್ತದೆ. ಆ ಬೆಟ್ಟದ ಶಿಖರದಿಂದ ನೆಫ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣಗಳಿಗೂ ಅಲ್ಲಿಂದ ಕಿರ್ಯತ್ ಯಾರೀಮ್ ಆದ ಬಾಲಾ ಎಂಬ ಊರಿನವರೆಗೆ ಹೋಗುತ್ತದೆ. ಬಾಲಾದಿಂದ ಪಶ್ಚಿಮಕ್ಕಿರುವ ಸೇಯೀರ್ ಬೆಟ್ಟವನ್ನು ಸುತ್ತಿ, ಅಲ್ಲಿಂದ ಕೆಸಾಲೋನಿನ ಯಾರೀಮ್ ಬೆಟ್ಟದ ಉತ್ತರಕ್ಕೂ ಅಲ್ಲಿಂದ ಬೇತ್ ಷೆಮೆಷ್ ಕಡೆಗೆ ಇಳಿದು ತಿಮ್ನಾಗೆ ಹೋಯಿತು. ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೂ, ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯಬ್ನೆಯೇಲಿಗೆ ಹೊರಟು ಸಮುದ್ರ ತೀರದಲ್ಲಿ ಮುಗಿಯುತ್ತದೆ. ಅದು ಪಶ್ಚಿಮದ ಮೇರೆಯ ಮೆಡಿಟರೇನಿಯನ್ ಮಹಾಸಾಗರವಾಗಿದೆ. ಇದೇ ಯೆಹೂದ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ. ಇದಲ್ಲದೆ ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರ ಯೆಫುನ್ನೆಯ ಮಗ ಕಾಲೇಬನಿಗೆ ಅನಾಕನ ತಂದೆಯ ಕಿರ್ಯತ್ ಅರ್ಬ ಎಂಬ ಹೆಬ್ರೋನನ್ನು ಯೆಹೂದನ ಮಕ್ಕಳ ನಡುವೆ ಸೊತ್ತಾಗಿ ಕೊಟ್ಟನು. ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ, ಅಹೀಮನ್, ತಲ್ಮೈರನ್ನು ಹೊರಡಿಸಿಬಿಟ್ಟನು. ಕಾಲೇಬನು ಅಲ್ಲಿಂದ ಹೊರಟು, ಕಿರ್ಯತ್ ಸೇಫೆರ್ ಎಂದು ಅನ್ನಿಸಿಕೊಳ್ಳುತ್ತಿದ್ದ ದೆಬೀರಿನ ವಾಸಿಗಳ ವಿರೋಧವಾಗಿ ಹೋದನು. ಅಲ್ಲಿ ಕಾಲೇಬನು, “ಕಿರ್ಯತ್ ಸೇಫೆರನ್ನು ದಾಳಿಮಾಡಿ ತೆಗೆದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ,” ಎಂದು ಹೇಳಿದ್ದನು. ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು. ಒಂದು ದಿನ ಅಕ್ಷಾ ಒತ್ನಿಯೇಲನೊಂದಿಗೆ ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಇನ್ನೂ ಒಂದು ಹೊಲವನ್ನು ಕೇಳುವುದಕ್ಕೆ ಅವನನ್ನು ಪ್ರೇರೇಪಿಸಿ, ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳಿಗೆ, “ನಿನಗೆ ಏನು ಬೇಕು?” ಎಂದನು. ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನೀನು ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು. ಯೆಹೂದ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸೊತ್ತಿನ ವಿವರ: ದಕ್ಷಿಣದ ಕಟ್ಟಕಡೆಗಿರುವ ಎದೋಮಿನ ಮೇರೆಗೆ ಸರಿಯಾಗಿ ಯೆಹೂದ ಗೋತ್ರಕ್ಕೆ ಇರುವ ಪಟ್ಟಣಗಳು. ಅವು: ಕಬ್ಜಯೇಲ್, ಏದೆರ್, ಯಾಗೂರ್, ಕೀನಾ, ದೀಮೋನಾ, ಅದಾದಾ, ಕೆದೆಷ್, ಹಾಚೋರ್, ಇತ್ನಾನ್, ಜೀಫ್, ಟೆಲೆಮ್, ಬೆಯಾಲೋತ್, ಹಾಚೋರ್ ಹದತ್ತಾ, ಕಿರ್ಯೋತ್ ಹೆಚ್ರೋನ್, ಎಂಬುವ ಹಾಚೋರ್, ಅಮಾಮ್, ಶೆಮ, ಮೋಲಾದ, ಹಜರ್ ಗದ್ದಾ, ಹೆಷ್ಮೋನ್, ಬೇತ್ ಪೆಲೆಟ್, ಹಚರ್ ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ, ಬಾಲಾ, ಇಯೀಮ್, ಎಚೆಮ್, ಎಲ್ತೋಲದ್, ಕೆಸೀಲ್, ಹೊರ್ಮಾ, ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ, ಲೆಬಾವೋತ್, ಶಿಲ್ಹೀಮ್, ಆಯಿನ್, ರಿಮ್ಮೋನ್ ಎಂಬವುಗಳೇ ಪಟ್ಟಣಗಳೆಲ್ಲಾ ಇಪ್ಪತ್ತೊಂಬತ್ತು ಮತ್ತು ಅವುಗಳ ಗ್ರಾಮಗಳು. ಪಶ್ಚಿಮದ ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ಣಾ, ಜಾನೋಹ, ಏಂಗನ್ನೀಮ್, ತಪ್ಪೂಹ, ಏನಾಮ್, ಯರ್ಮೂತ್, ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು. ಚೆನಾನ್, ಹದಾಷಾ, ಮಿಗ್ದಲ್ಗಾದ್, ದಿಲಾನ್, ಮಿಚ್ಪೆ, ಯೊಕ್ತೇಲ್, ಲಾಕೀಷ್, ಬೊಚ್ಕತ್, ಎಗ್ಲೋನ್, ಕಬ್ಬೋನ್, ಲಹ್ಮಾಸ್, ಕಿತ್ಲೀಷ್, ಗೆದೇರೋತ್, ಬೇತ್‌ದಾಗೋನ್, ನಾಮಾ, ಮಕ್ಕೇದಾ, ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳು. ಇದಲ್ಲದೆ ಲಿಬ್ನಾ, ಎತೆರ್, ಆಷಾನ್, ಇಪ್ತಾಹ, ಅಶ್ಣಾ, ನೆಜೀಬ್, ಕೆಯೀಲಾ, ಅಕ್ಜೀಬ್, ಮಾರೇಷಾ, ಎಂಬ ಒಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳು. ಎಕ್ರೋನ್ ಅದರ ಪಟ್ಟಣಗಳು ಗ್ರಾಮಗಳು ಸಹ. ಎಕ್ರೋನಿನ ಪಶ್ಚಿಮ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು. ಅಷ್ಡೋದ್ ಪಟ್ಟಣ ಮತ್ತು ಅದರ ಸುತ್ತಲಿನ ಪಟ್ಟಣಗಳೂ ಗ್ರಾಮಗಳೂ, ಗಾಜಾ, ಅದರ ಪಟ್ಟಣಗಳು, ಅದರ ಗ್ರಾಮಗಳು. ಈಜಿಪ್ಟಿನ ಕಲ್ಲಿನ ನಾಲೆ, ಮೆಡಿಟೆರಿಯನ್ ಸಮುದ್ರ, ಅದರ ಮೇರೆ ಇವುಗಳವರೆಗೂ ಇತ್ತು. ಬೆಟ್ಟಗಳಲ್ಲಿರುವ ಪ್ರದೇಶಗಳು: ಶಾಮೀರ್, ಯತ್ತೀರ್, ಸೋಕೋ, ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ, ಅನಾಬ್, ಎಷ್ಟೆಮೋ, ಅನೀಮ್, ಗೋಷೆನ್, ಹೋಲೋನ್ ಮತ್ತು ಗಿಲೋ ಎಂಬ ಹನ್ನೊಂದು ಪಟ್ಟಣಗಳು ಅವುಗಳ ಗ್ರಾಮಗಳು. ಅರಬ್, ರೂಮಾ, ಎಷಾನ್, ಯಾನೂಮ್, ಬೇತ್ ತಪ್ಪೂಹ, ಅಫೇಕಾ, ಹುಮ್ಟಾ, ಹೆಬ್ರೋನೆಂಬ ಕಿರ್ಯತ್ ಅರ್ಬ, ಚೀಯೋರ್ ಎಂಬ ಒಂಬತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳು. ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ, ಇಜ್ರೆಯೇಲ್, ಯೊಗ್ದೆಯಾಮ್, ಜಾನೋಹ, ಕಯಿನ್, ಗಿಬೆಯ, ತಿಮ್ನಾ ಎಂಬ ಹತ್ತು ಪಟ್ಟಣಗಳು, ಅವುಗಳ ಗ್ರಾಮಗಳು. ಹಲ್ಹೂಲ್, ಬೇತ್ ಚೂರ್, ಗೆದೋರ್, ಮಾರಾತ್, ಬೇತ್ ಅನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು, ಅವುಗಳ ಗ್ರಾಮಗಳು. ಕಿರ್ಯತ್ ಯಾರೀಮ್ ಎಂಬ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು. ಮರುಭೂಮಿಯಲ್ಲಿರುವ ಬೇತ್ ಅರಾಬಾ, ಮಿದ್ದೀನ್, ಸೆಕಾಕಾ, ನಿಬ್ಷಾನ್, ಉಪ್ಪಿನ ಪಟ್ಟಣವು ಮತ್ತು ಏನ್ಗೆದಿ ಎಂಬ ಪಟ್ಟಣಗಳನ್ನು ಒಳಗೊಂಡ ಆರು ಪಟ್ಟಣಗಳು ಅವುಗಳ ಗ್ರಾಮಗಳು. ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೆಹೂದ ಗೋತ್ರದವರಿಂದ ಹೊರಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ದಿವಸದವರೆಗೂ ಯೆಬೂಸಿಯರು ಯೆಹೂದ ಗೋತ್ರದವರ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.